ಕರೆ ಫಾರ್ವರ್ಡ್ ಮಾಡುವ (Call Forwarding Scam) ವಂಚನೆಯು ಈಗ ಸ್ವಲ್ಪ ಸಮಯದಿಂದ ಇದೆ ಮತ್ತು, ವಂಚಕರು ತರಹೇವಾರಿ ಮಾರ್ಗಗಳ ಮೂಲಕ ಇನ್ನೂ ಮೋಸವನ್ನರಿಯದವರನ್ನ ಬಲಿಪಶುಮಾಡತ್ತಿರುವುದು ದುರದೃಷ್ಟವೇ ಸರಿ.
(Call Forwarding Scam) ವಂಚನೆಯನ್ನ ಹೇಗೆ ಮಾಡುತ್ತಾರೆ ಎಂಬುದನ್ನ ನೀವು ತಿಳಿಯಲೇ ಬೇಕು:
- ನಿಮ್ಮ ಮೊಬೈಲ್ ನೆಟ್‌ವರ್ಕ್ ಆಪರೇಟರ್ ಅಥವಾ ಇಂಟರ್ನೆಟ್ ಸೇವಾ ಪೂರೈಕೆದಾರರೆಂದೋ ಆಥವಾ ಗ್ರಾಹಕ ಪ್ರತಿನಿಧಿಯೆಂದೋ ಹೇಲಿಕೊಂಡು ನಿಮಗೆ ಕರೆ ಮಾಡುತ್ತಾರೆ. ನಿಮ್ಮ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಅಥವಾ ನಿಮ್ಮ ಸಿಮ್ ಕಾರ್ಡ್‌ನಲ್ಲಿ ಏನಾದರೂ ಸಮಸ್ಯೆ ಇದೆ ಎಂದು ಅವರು ನಿಮಗೆ ತಿಳಿಸುತ್ತಾರೆ. ಇದಕ್ಕೆ ತಕ್ಷಣ ಪರಿಹಾರವಾಗಿ *401* ನಿಂದ ಪ್ರಾರಂಭಿಸಿ ನಿಮ್ಮ ಫೋನ್‌ನಿಂದ ಸಂಖ್ಯೆಯನ್ನು ಡಯಲ್ ಮಾಡಲು ಕೇಳುತ್ತಾರೆ.
- ಸ್ಕ್ಯಾಮರ್‌ಗಳು (ವಂಚಕರು) ಮೊದಲು ನಿಮ್ಮ ಕರೆಗಳನ್ನು *401* ನ ಮೂಲಕ ಅವರ ಮೊಬೈಲ್ ಸಂಖ್ಯೆಗೆ ಫಾರ್ವರ್ಡ್ ಮಾಡಿಕೊಳ್ಳುವುದು. ಅದರಿಂದ ನಿಮಗೆ ಬರುವ ಕರೆಗಳು, ಮೆಸೇಜ್‌ಗಳು, ಓ.ಟಿ.ಪಿಗಳು ಎಲ್ಲವೂ ಫಾರ್‌ವರ್ಡೆಡ್ ನಂಬರ್‌ಗೆ ಹೋಗುತ್ತದೆ. ನಂತರ ಅವರು ಸದರಿ ಮೊಬೈಲ್ ನಂಬರ್ ಲಿಂಕ್ ಇರುವ ಬ್ಯಾಂಕ್ ಖಾತೆಗಳು ಹಾಗು ನಿಮ್ಮ ಇತರ ಖಾತೆಗಳಿಗೆ ಲಾಗ್ ಇನ್ ಮಾಡಲು ಪ್ರಯತ್ನಿಸುತ್ತಾರೆ. ಸ್ಕ್ಯಾಮರ್ ನಿಮ್ಮ ಕರೆಗಳನ್ನು ಪ್ರವೇಶಿಸಬಹುದು ಮತ್ತು ಆ ರೀತಿಯಲ್ಲಿ OTP ಗಳನ್ನು ಸ್ವೀಕರಿಸಬಹುದು.
ಈ ದಿನಗಳಲ್ಲಿ ವಂಚಕರು ಇನ್ನಷ್ಟು ನುರಿತಿದ್ದಾರೆ. ಅವರು ನಿಮ್ಮ ಇತರ ಖಾತೆಗಳನ್ನು ಕೂಡ 2-ಹಂತದ ದೃಢೀಕರಣವನ್ನು ಹೊಂದಿಸುತ್ತಾರೆ ಅದರಿಂದ ನಿಮಗೆ ನಿಮ್ಮ ಖಾತೆಗೆ ಪ್ರವೇಶವನ್ನು ಮರಳಿ ಪಡೆಯಲು ಕಷ್ಟವಾಗುತ್ತದೆ.
ವಂಚಕರು ತಮ್ಮ ಮೋಸ ಜಾಲದ ಮೂಲಕ ಜನರನ್ನು ಮೋಸಗೊಳಿಸಲು ಇನ್ನೂ ಬೇರೆ ಬೇರೆ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಉದಾಹರಣೆಗೆ, ಅವರು ನಿಮ್ಮ ಮೊಬೈಲ್ ನೆಟ್‌ವರ್ಕ್ ಆಪರೇಟರ್‌ನಿಂದ ಕರೆ ಮಾಡುತ್ತಿರುವಂತೆ ಕಾಣುವಂತೆ ಮಾಡಲು ಅವರು ನಕಲಿ ಕಾಲರ್ ಐಡಿಗಳನ್ನು ಬಳಸಬಹುದು. ಅವರು ಸರ್ಕಾರಿ ಅಥವಾ ಕಾನೂನು ಇಲಾಖೆಯಿಂದ ಕರೆ ಮಾಡುವಂತೆ ನಟಿಸಬಹುದು.
ಸುರಕ್ಷಿತವಾಗಿ ಉಳಿಯುವುದು ಹೇಗೆ
- ಯಾವಾಗಲೂ ಸಂಖ್ಯೆಯನ್ನು ಪರಿಶೀಲಿಸಿ ಮತ್ತು ಸಂಖ್ಯೆಯನ್ನು ಖಚಿತಪಡಿಸಿಕೊಂಡು ಕರೆ ಸ್ವೀಕರಿಸಿ.
- ಕರೆ ಮಾಡುವವರ ಸಂಖ್ಯೆಯನ್ನು ಪರಿಶೀಲಿಸಲು ಬೇಕಾದರೆ ನಂಬಿಕಸ್ಥ ಎಪ್ಲಿಕೇಷನ್ ಬಳಸಿ ಸಂಖ್ಯೆ ಸ್ಕ್ಯಾಮ್ ಸಂಖ್ಯೆಯೇ ಎಂದು ನೀವು ತ್ವರಿತವಾಗಿ ನೋಡಬಹುದು ಮತ್ತು ಕರೆ-ಫಾರ್ವರ್ಡ್ ಮಾಡುವ ಮೊಸಕ್ಕೆ ಒಳಗಾಗುವುದನ್ನು ತಪ್ಪಿಸಬಹುದು.
- ಸಾಮಾನ್ಯವಾಗಿ ನಿಮ್ಮ ಕೋರಿಕೆ ಇಲ್ಲವಾದಲ್ಲಿ ಗ್ರಾಹಕ ಸೇವಾ ಪ್ರತಿನಿಧಿಗಳು ಕರೆ ಮಾಡುವುದಿಲ್ಲ. ನಿಮ್ಮಿಂದ ಕೋರಿಕೆ ಇದ್ದರೆ ಮಾತ್ರವೇ ಕರೆ ಖಚಿತಪಡಿಸಿ ಸ್ವೀಕರಿಸಿ
- ನಿಮ್ಮ ಫೋನ್‌ನಿಂದ ಕೋಡ್ ಅನ್ನು ಡಯಲ್ ಮಾಡಲು ಅಥವಾ SMS ಕಳುಹಿಸಲು ಯಾರಾದರೂ ನಿಮ್ಮನ್ನು ಕೇಳಿದರೆ, ತುಂಬಾ ಜಾಗರೂಕರಾಗಿರಿ ಮತ್ತು ಇದು ಅಸಂಬದ್ಧ ಹಾಗು ಕಾನೂನುಬದ್ಧವಾಗಿಲ್ಲ ಎಂದು ನಿಮಗೆ ಅನಿಸಿದರೆ SMS ಕಳುಹಿಸಬೇಡಿ.
- ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ಅಧಿಕಾರಿಗಳಿಗೆ/ಪೋಲೀಸರಿಗೆ ವರದಿ ಮಾಡಿ. ವಂಚಕರು ನಿಮ್ಮನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ನೀವು ಭಾವಿಸಿದರೆ ನಿಮ್ಮ ಮೊಬೈಲ್ ನೆಟ್‌ವರ್ಕ್ ಆಪರೇಟರ್ ಮತ್ತು ಸ್ಥಳೀಯ ಪೊಲೀಸ್ ಇಲಾಖೆಯನ್ನು ನೀವು ಸಂಪರ್ಕಿಸಬಹುದು.
- ಅಚಾನಕ್ಕಾಗಿ ವಂಚನೆಗೊಳಗಾಗಿದ್ದರೆ ನಿಮ್ಮ ಮೊಬೈಲ್ ಆಪರೇಟರ್ ಅನ್ನು ಸಂಪರ್ಕಿಸಿ ಮತ್ತು ಕರೆ ಫಾರ್ವರ್ಡ್ ಮಾಡುವುದನ್ನು ನಿಲ್ಲಿಸಿ.
